ಪ್ರಬುದ್ಧ ಮತದಾರರು ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸಶ್ರೀರಾಮ ಸರ್ವಜನಾಂಗದ ವ್ಯಕ್ತಿ. ಆತನ ರಾಜ್ಯಭಾರದಲ್ಲಿ ಎಲ್ಲ ವರ್ಗದ ಜನರಿಗೂ ಸಮಾನ ನ್ಯಾಯ ನೀಡಿದ್ದ. ಶ್ರೀರಾಮ ಎಲ್ಲಾ ಜನರಿಗೂ ನ್ಯಾಯಕೊಟ್ಟ. ಆದ್ದರಿಂದಲೇ ರಾಮರಾಜ್ಯದ ಕಲ್ಪನೆ ಬಂತು. ಎಲ್ಲಾ ಜನರು ಆತನ ಕಾಲದಲ್ಲಿ ಸುಖಿಯಾಗಿದ್ದಾಗಿದ್ದರು. ರಾಜಕೀಯವಾಗಿ ಬಳಸಿಕೊಳ್ಳಬೇಕು ಎಂಬ ಕಾರಣಕ್ಕೆ ಆತುರವಾಗಿ ಮತ್ತು ಅಪೂರ್ಣಗೊಂಡಿರುವ ಮಂದಿರವನ್ನು ಉದ್ಘಾಟಿಸಲಾಗಿದೆ. ದೇಶವು ಜಾತ್ಯತೀತ ರಾಷ್ಟ್ರ. ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ. ಏನೇ ಮಾಡಿದರೂ ಅದು ನಡೆಯಲ್ಲ.