ಜನರು ಕೇಂದ್ರ ಸಚಿವ ಎಚ್ಡಿಕೆ ಮಾತಿಗೆ ಮರುಳಾಗುವುದಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅಂದ ಮೇಲೆ ಕುಮಾರಸ್ವಾಮಿ ಎಲ್ಲಿ ಬೇಕಾದರೂ ನಿಲ್ಲಲಿ. ರಾಮನಗರಕ್ಕೆ ಬಂದರು, ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ನಿಂತು ಗೆದ್ದರು, ಈಗ ಅವರ ಮಗ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದಾರೆ. ರಾಮನಗರ ನನ್ನ ಕರ್ಮಭೂಮಿ ಅಂತಾರೆ. ನಾನು ಆ ವಿಷಯ ಬಗ್ಗೆ ಚರ್ಚೆ ಮಾಡುವುದಿಲ್ಲ.