ಬೆಂಗಳೂರಂತೆ ದಾವಣಗೆರೆಯಲ್ಲೂ ಮನೆ ಮುಂದೆ ಮರಳಿ ಕಸ ಜಾರಿಗೊಳಿಸಿ
Oct 31 2025, 01:30 AM ISTಗ್ರೇಟರ್ ಬೆಂಗಳೂರು ಅಥಾರಿಟಿಯವರು ಬೀದಿಗೆ ಕಸ ಎಸೆಯುವವರ ಮನೆ ಮುಂದೆ ಮರಳಿ ಕಸ ಹಾಕುವ, ₹1 ಸಾವಿರ ದಂಡ ವಿಧಿಸುವ, 2ನೇ ಸಲ ಕಸ ಹಾಕಿದರೆ ₹2 ಸಾವಿರ ದಂಡ ವಿಧಿಸುವ ಮೂಲಕ ಸಿಕ್ಕಸಿಕ್ಕಲ್ಲಿ ಕಸ ಎಸೆಯುವವರ ವಿರುದ್ಧ ವಿನೂತನ ಪ್ರಯತ್ನ ಮಾಡಿರುವುದು ಶ್ಲಾಘನೀಯ. ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲೂ ಅಂತಹ ಪ್ರಯತ್ನ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ ತಿಳಿಸಿದ್ದಾರೆ.