ಪಾವತಿಯಾಗದ ಡಿಸೇಲ್ ಬಿಲ್: ಕಸ ಸಂಗ್ರಹ ವಾಹನಗಳ ಸಂಚಾರ ಬಂದ್
Jun 09 2024, 01:30 AM ISTಬೀರೂರು, ಒಂದು ದಿನ ಮನೆ ಮುಂದೆ ಸಂಗಹ್ರವಾದ ಕಸ ಅಲ್ಲಿಯೇ ಉಳಿದು ಬಿಟ್ಟರೆ ಎಷ್ಟು ಗಬ್ಬು ನಾರುತ್ತದೆಯೋ ಅಂತಹದರಲ್ಲಿ ಕಳೆದ ಒಂದು ವಾರದಿಂದ ಪೌರಕಾರ್ಮಿಕರು ತೆಗೆದ ಕಸ ಅಲ್ಲಿಯೇ ಉಳಿದು ಬಿಟ್ಟರೇ ನಾಗರಿಕರ ಕಥೆ ಏನಾಗಬೇಕು?. ಜೊತೆಗೆ ಡೆಂಘೀ, ಟೈಫಾಯಿಡ್ ಮತ್ತಿತರ ಕಾಯಿಲೆಗಳು ಇಂತಹ ಕಸದಿಂದಲೇ ಸೊಳ್ಳೆಗಳ ಹಾವಳಿ ಹೆಚ್ಚುತ್ತದೆ ಎಂದು ತಿಳಿದಿದ್ದರೂ ತಮ್ಮ ತಾತ್ಸಾರ ಮನೋಭಾವದಿಂದ ಪುರಸಭೆ ಅಧಿಕಾರಿಗಳು ಇಂದು ಎಲ್ಲಾ ಕಸವಿಲೇವಾರಿ ವಾಹನಗಳು ಸ್ಥಗಿತವಾಗಲು ಕಾರಣವಾಗಿದ್ದು, ಈ ಸ್ಥಿತಿಯನ್ನು ನಾಗರಿಕರು ಎದುರಿಸುವಂತಾಗಿದೆ