ಹೋರಾಟದ ಹಾದಿ ಹಿಡಿದ ಮೂರ್ಕಣ್ಣು ಗುಡ್ಡ ನಿವಾಸಿಗಳು

Jul 28 2025, 12:30 AM IST
ಹಲವು ವರ್ಷಗಳಿಂದ ನಡೆಯುತ್ತಿದ್ದ ಮೂರ್ಕಣ್ಣು ಗುಡ್ಡ ವ್ಯಾಪ್ತಿಯ ಸೆಕ್ಷನ್ 4ರ ಹೋರಾಟ ಇದೀಗ ತನ್ನ ಆಯಾಮವನ್ನೇ ಬದಲಿಸಿದೆ. 100 ವರ್ಷಗಳ ಹಿಂದಿನ ದಾಖಲೆಗಳ ಹುಡುಕಾಟದಲ್ಲಿ ತೊಡಗಿದ್ದ ಈ ಭಾಗದ ಜನರೀಗ ನೀರಿನಲ್ಲಿ ಹುಣಸೆಹಣ್ಣು ತೊಳೆಯುವ ಪ್ರಯತ್ನ ಕೈಬಿಟ್ಟು ಸಂಘಟಿತ ಹೋರಾಟದಿಂದ ನ್ಯಾಯ ಪಡೆಯುವ ಪ್ರಯತ್ನದಲ್ಲಿದ್ದಾರೆ. ಹಿಂದಿನ ಉಪವಿಭಾಗಾಧಿಕಾರಿಯಾಗಿದ್ದ ಪ್ರತೀಕ್ ಬಯಾಲ್ ಹಾಗೂ ಹಿಂದೆ ಕ್ಷೇತ್ರಕ್ಕೆ ರಾಜಕೀಯ ಸ್ಪರ್ಧಿಯಾಗಿ ಆಗಮಿಸಿದ್ದ ನಾರ್ವೇ ಸೋಮಶೇಖರ್ ಸೆಕ್ಷನ್ 4ನಿಂದ ಈ ಭಾಗದ ಜಮೀನನ್ನು ಕೈ ಬಿಟ್ಟಿರುವ ದಾಖಲೆಗಳ ಶೋಧಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದು, ವಿಧಾನಸೌಧದ ದಾಖಲೆ ಸಂಗ್ರಹಗಾರವನ್ನು ಜಾಲಾಡಿಸಿದರಾದರೂ ಯಾವುದೇ ಪ್ರಯೋಜವಾಗಿರಲಿಲ್ಲ.