ಬಾಣಾವರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ
Sep 17 2025, 01:05 AM IST ಬಾಣಾವರ ಸರ್ಕಾರಿ ಆಸ್ಪತ್ರೆ, ಮಕ್ಕಳ ಮನೆ ಶಾಲೆ ಹಾಗೂ ಉಪ-ನೋಂದಣಾಧಿಕಾರಿ ಕಚೇರಿಗೆ ಸಂಪರ್ಕಿಸುವ ಮುಖ್ಯರಸ್ತೆಯಾಗಿ ಈ ರಸ್ತೆಯು ಬಳಕೆಯಾಗುತ್ತಿದ್ದು, ಪ್ರತಿದಿನ ನೂರಾರು ವಾಹನಗಳು ಹಾಗೂ ಪಾದಚಾರಿ ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ರಸ್ತೆ ಮಧ್ಯೆ ಬಿದ್ದಿದ್ದ ದೊಡ್ಡ ಗುಂಡಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು, ಇಮ್ರಾನ್ ಮತ್ತು ಅವರ ಸ್ನೇಹಿತರು ಯಾವುದೇ ಸರ್ಕಾರಿ ನೆರವಿಲ್ಲದೆ, ತಮ್ಮ ಹೊರತೊಂದರೆಯಿಂದ ಗುಂಡಿಯನ್ನು ಮುಚ್ಚಿದ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.