ಪ್ರಾಂಶುಪಾಲರ ವರ್ಗಾವಣೆ ರದ್ದತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
Feb 21 2025, 12:48 AM ISTಚಿಕ್ಕಮಗಳೂರು, ತಾಲೂಕಿನ ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ಮೇಲೆ ಕೆಲವರು ವೈಯಕ್ತಿಕ ಧ್ವೇಷದಿಂದ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡುತ್ತಿದ್ದು, ಅದರ ಸತ್ಯಾಸತ್ಯತೆ ಪರಿಶೀಲಿಸದೇ ವರ್ಗಾವಣೆ ಮಾಡಿರುವುದು ಸರಿಯಲ್ಲ, ಕೂಡಲೆ ವರ್ಗಾವಣೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ದಸಂಸ (ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ) ಮುಖಂಡರ ನೇತೃತ್ವದಲ್ಲಿ ವಸತಿ ಶಾಲೆ ಮಕ್ಕಳ ಪೋಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.