ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮಾಡಿಲ್ಲ: ಆರ್.ಬಿ. ಸಚಿವ ತಿಮ್ಮಾಪುರ
Jan 15 2024, 01:46 AM ISTಬಾಗಲಕೋಟೆ: ನನ್ನ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ, ಹೀಗಾಗಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವ ಆಗಲ್ಲ, ಅವನ್ಯಾವನೋ ಕಂಪ್ಲೆಂಟ್ ಮಾಡಿದವನನ್ನು ಹುಡುಕಾಡುತ್ತಿದ್ದೇವೆ, ಅವನೆಲ್ಲಿದ್ದಾನೋ ಗೊತ್ತಿಲ್ಲ, ಅವನು ನಮಗೆ ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನಾದರೂ ವರ್ಗಾವಣೆ ಮಾಡಿದರೆ ತಾನೆ ಭ್ರಷ್ಟಾಚಾರ ಆಗುತ್ತೆ? ವರ್ಗಾವಣೆ ಆದ ತಕ್ಷಣ ಭ್ರಷ್ಟಾಚಾರವೇ ಆಗಿರುತ್ತದೆಯೇ? ಯಾರೋ ಆಗದೇ ಇರುವವರು ಇಂತದ್ದೆಲ್ಲ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.