ಸಿಡಿಲಿನಿಂದ ವಿದ್ಯುತ್ ಪರಿವರ್ತಕಕ್ಕೆ ಹಾನಿ
May 02 2025, 12:13 AM ISTಸಿಡಿಲಿನ ಹೊಡೆತಕ್ಕೆ ವಿದ್ಯುತ್ ಪರಿವರ್ತಕ ಹಾನಿಯಾದ ಪರಿಣಾಮ ಇಲ್ಲಿನ ನಿವಾಸಿಗಳು ಕಳೆದ ಒಂದು ವಾರದಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಂಗಲ್ ಫೇಸ್ ವಿದ್ಯುತ್ತನ್ನು ಇದೇ ಟಿಸಿ ಮೂಲಕ ಪೂರೈಸಲಾಗುತ್ತಿದೆ. ೫ ಕೊಳವೆಬಾವಿಗಳು ಈ ಟಿಸಿಯನ್ನೇ ಅವಲಂಬಿಸಿದ್ದು, ಓವರ್ ಹೆಡ್ ಟ್ಯಾಂಕ್ ಭರ್ತಿ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಒಂದು ವಾರದಿಂದ ಸಿಂಗಲ್ ಫೇಸ್ ವಿದ್ಯುತ್ ಕಾರಣದಿಂದಾಗಿ ಕೊಳವೆ ಬಾವಿ ಮೋಟಾರ್ ಚಾಲನೆ ಆಗದ ಪರಿಣಾಮ ಸಂತೋಷನಗರ, ಮೇಲನಹಳ್ಳಿ, ಈದ್ಗಾ ರಸ್ತೆ, ಮುಖ್ಯ ರಸ್ತೆಯ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.