ಬೇಲೂರು ತಾಲೂಕಿನಲ್ಲಿ ಕಾಡಾನೆ ಹಾವಳಿ ಹಿನ್ನೆಲೆ ಸಚಿವರಿಗೆ ಶಾಸಕ ಸುರೇಶ್ ಪತ್ರ
Sep 12 2025, 12:06 AM ISTಬೇಲೂರು ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ಸಾರ್ವಜನಿಕರು ಭಯದಿಂದ ಜೀವನ ನಡೆಸುತ್ತಿದ್ದಾರೆ. ಬಿಕ್ಕೋಡು ಹೋಬಳಿ ವ್ಯಾಪ್ತಿಯ ಬಿಕ್ಕೋಡು, ಮಾಳೇಗೆರೆ, ಕೊತ್ತನಹಳ್ಳಿ, ಹಾಡಗೆರೆ, ಚಿಕ್ಕೋಲೆ, ಪುರ, ಹೊನ್ನೇಮನೆ, ಗಿಣ್ಣನಮನೆ ಹಾಗೂ ಕೋಗಿಲೆಮನೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಡಾನೆ ಗುಂಪುಗಳ ದಾಳಿ ನಡೆಯುತ್ತಿದ್ದು, ರೈತರು ಬೆಳೆದ ಬಾಳೆ, ತೆಂಗು, ಅಡಿಕೆ, ಜೋಳ, ಶುಂಠಿ ಮತ್ತು ಕಾಫಿ ಬೆಳೆಗಳಿಗೆ ಭಾರೀ ಹಾನಿ ಉಂಟಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.