ಅರಣ್ಯ ಇಲಾಖೆ ಒತ್ತುವರಿ ಜಾಗ ತೆರವು ಆದೇಶಕ್ಕೆ ಸ್ವಾಗತ

Sep 28 2025, 02:00 AM IST
ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಒತ್ತುವರಿ ಜಾಗಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶವು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದು ಅರಣ್ಯ ರಕ್ಷಣೆಗೆ ಒಳ್ಳೆಯ ಹೆಜ್ಜೆಯಾದರೂ, ಕಾನೂನು ಬದ್ಧವಾಗಿ ಸಣ್ಣ ಹಿಡುವಳಿದಾರ ರೈತರಿಗೆ ಮಂಜೂರಾಗಿರುವ ಜಾಗವನ್ನು ಅವರಿಗೆ ಬಿಟ್ಟುಕೊಡಬೇಕು. ಅಕ್ರಮವಾಗಿ ಕಬಳಿಸಿದ ಜಾಗವನ್ನಷ್ಟೇ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಹಾಸನ ಜಿಲ್ಲೆಯಲ್ಲಿ ಒಟ್ಟು ೨,೧೧,೭೬೩ ಎಕರೆ ಅರಣ್ಯ ಪ್ರದೇಶವಿದ್ದು, ಅದರಲ್ಲೂ ಸುಮಾರು ೩೦,೦೦೦ ಎಕರೆ ಪ್ರದೇಶ (ಶೇಕಡಾ ೧೫ರಷ್ಟು) ಒತ್ತುವರಿಯಾಗಿದ್ದು, ಕೆಲವನ್ನು ಸರ್ಕಾರವೇ ರೈತರಿಗೆ ಮಂಜೂರು ಮಾಡಿದೆ. "ಇವುಗಳಲ್ಲಿ ಮಂಜೂರಾದ ಜಾಗಗಳನ್ನು ಹೊರತುಪಡಿಸಿ ಉಳಿದ ಅಕ್ರಮ ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಬೇಕು " ಎಂದು ಶಿವರಾಂ ಅಭಿಪ್ರಾಯಪಟ್ಟರು.