ಅಣ್ಣತಮ್ಮಂದಿರ ದೃಷ್ಟಿ ಈಗ ಚನ್ನಪಟ್ಟಣದ ಮೇಲೆ!
Jun 16 2024, 01:47 AM ISTಚನ್ನಪಟ್ಟಣ: ಅಣ್ಣತಮ್ಮಂದಿರ ವಕ್ರದೃಷ್ಟಿ ಇದೀಗ ಚನ್ನಪಟ್ಟಣದ ಮೇಲೆ ಬಿದ್ದಿದೆ. ಇಲ್ಲಿನ ಜನ ಬುದ್ಧಿವಂತರಿದ್ದು, ಅವರನ್ನು ಹೆದರಿಸಿ, ಬೆದರಿಸಲು ಆಗುವುದಿಲ್ಲ. ಕ್ಷೇತ್ರದ ಜನ ಎಚ್ಚರಿಕೆಯಿಂದ ಇದ್ದು, ಅಣ್ಣತಮ್ಮಂದಿರಿಂದ ಕ್ಷೇತ್ರವನ್ನು ಉಳಿಸಿಕೊಳ್ಳಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ವಾಗ್ಗಾಳಿ ಮಾಡಿದರು.