ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ತಮ್ಮ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಫಿ ನಾಡು ಕರ್ನಾಟಕವನ್ನು ಹಾಡಿಹೊಗಳಿದ್ದಾರೆ. ಜತೆಗೆ, ರಾಜ್ಯದ ಮುಧೋಳ ತಳಿಯ ನಾಯಿಯನ್ನು ಇದೇ ಮೊದಲ ಬಾರಿ ಗಡಿ ಭದ್ರತಾ ಪಡೆಗೆ ಸೇರಿಸಿಕೊಂಡ ಬಗ್ಗೆಯೂ ಉಲ್ಲೇಖಿಸಿ, ದೇಸೀ ಶ್ವಾನಗಳ ಕ್ಷಮತೆಯನ್ನು ಶ್ಲಾಘಿಸಿದ್ದಾರೆ.