ಮೋದಿ ವಿರುದ್ಧ ಸೀರೆ ಪೋಸ್ಟ್: ಕೈ ನಾಯಕಗೆ ಸೀರೆ ಉಡಿಸಿದ ಬಿಜೆಪಿಗರು!
Sep 24 2025, 01:04 AM ISTಕಾಂಗ್ರೆಸ್ ಕಾರ್ಯಕರ್ತ ಪ್ರಕಾಶ ಪಗಾರೆ ಅವರಿಗೆ ಬಿಜೆಪಿಯವರು ಸೇರಿಕೊಂಡು ಸಾರ್ವಜನಿಕವಾಗಿ ಸೀರೆ ಉಡಿಸಿದ ಘಟನೆ ಮಂಗಳವಾರ ಡೊಂಬಿವಲಿಯಲ್ಲಿ ನಡೆದಿದೆ. ಪಗಾರೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸೀರೆ ಉಟ್ಟಿರುವಂತೆ ಚಿತ್ರವೊಂದನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.