ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ಪ್ರತಿಭಟನೆ
Jan 28 2024, 01:17 AM ISTರಬಕವಿ-ಬನಹಟ್ಟಿ: ಡಾ.ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ರಬಕವಿ-ಬನಹಟ್ಟಿಯಲ್ಲಿ ಅಂಬೇಡ್ಕರ್ ಸೇನೆ, ದಲಿತ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರದ ಗಾಂಧಿ ವೃತ್ತದಿಂದ ಎಂ.ಎಂ. ಬಂಗ್ಲೆವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ನಂತರ ಅಂಬೇಡ್ಕರ್ ಸೇನೆಯ ಉತ್ತರ ಪ್ರಾಂತ ಅಧ್ಯಕ್ಷ ಶಿವಲಿಂಗ ಗೊಂಬಿಗುಡ್ಡ ಮಾತನಾಡಿ, ಕಲಬುರಗಿ ನಗರದ ಕೋಟನೂರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಉಗ್ರಗಾಮಿಗಳೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪರಿಸಬೇಕೆಂದು ತಹಸೀಲ್ದಾರಗೆ ಮನವಿ ಸಲ್ಲಿಸಿದರು.