ಜಾತಿ, ಆದಾಯ ಪ್ರಮಾಣಪತ್ರ ನಿರಾಕರಣೆ: ಹಾಸನ ಡಿಸಿಗೆ ದಂಡ
Jul 09 2025, 12:18 AM ISTಬೆಂಗಳೂರು: ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿಗೆ ಗಂಡನ ಆದಾಯ ಪ್ರಮಾಣ ಪರಿಗಣಿಸಿ ಜಾತಿ, ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಪ್ರಕರಣ ಸಂಬಂಧ ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷ (ಜಿಲ್ಲಾಧಿಕಾರಿ) ಮತ್ತು ಸದಸ್ಯರಿಗೆ ಎರಡು ಲಕ್ಷ ರು. ದಂಡ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.