ದೇವರಾಯನದುರ್ಗದ ದೇವಾಲಯಕ್ಕೆ ಎರಡು ಕೋಟಿ ಆದಾಯ
Nov 08 2024, 12:33 AM ISTನಗರದ ಸಮೀಪದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿವಿಧ ಮೂಲಗಳಿಂದ 2023-24ನೇ ಸಾಲಿನಲ್ಲಿ ಒಟ್ಟು ₹2,54,57,380 ಆದಾಯ ಸಂದಾಯವಾಗಿದೆ. ಹುಂಡಿಯೊಂದರಿಂದಲೇ ಒಟ್ಟು ₹1,09,79,254 ಸಂಗ್ರಹವಾಗಿದೆ. ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ದೇವಾಲಯದ ಇಒ ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.