ಹತ್ತಿ ಬೆಳೆಗಾರರನ್ನು ನಡುನೀರಲ್ಲಿ ಕೈಬಿಟ್ಟ ಕಂಪನಿ: ಆರೋಪ
Jul 04 2025, 12:32 AM ISTಹತ್ತಿ ಬೆಳೆ ಬೆಳೆಯಲು ಬಿತ್ತನೆ ಬೀಜ, ಖರ್ಚುವೆಚ್ಚಕ್ಕಾಗಿ ಮುಂಗಡ ಹಣಸಹಾಯ ಮಾಡುತ್ತಿದ್ದ ಶ್ರೀರಾಮ ಕಂಪನಿ ಈ ಬಾರಿ ರೈತರಿಗೆ ಮುಂಗಡ ಹಣ ನೀಡದೆ ಸತಾಯಿಸುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುಳೇದಗುಡ್ಡ ಕೃಷಿ ಕೇಂದ್ರದ ಅಧಿಕಾರಿ ಆನಂದ ಗೌಡರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.