ಎ.ಭದ್ರಪ್ಪ ಆರೋಪ ಸತ್ಯಕ್ಕೆ ದೂರ: ಮಲ್ಲಕಾರ್ಜುನ ಕಡಕೋಳ
Jun 21 2025, 12:49 AM ISTವೃತ್ತಿ ರಂಗಭೂಮಿ ರಂಗಾಯಣದ ಸಕಾರಾತ್ಮಕ ಚಟುವಟಿಕೆ, ನೂತನ ರಂಗಾಯಣ ನಿರ್ಮಾಣಕ್ಕೆ ಸರ್ಕಾರದಿಂದ 10 ಎಕರೆ ಜಮೀನು, ₹3 ಕೋಟಿ ಅನುದಾನ ಪಡೆದು, ಸಂಸ್ಥೆಯನ್ನು ಕಟ್ಟಲಾಗುತ್ತಿದೆ. ಇದನ್ನು ಸಹಿಸಲಾಗದೇ ಅಹಂಕಾರಿ, ಸ್ವಾರ್ಥ ತುಂಬಿರುವ ನೀಚ ಮನಸ್ಸಿನ ವ್ಯಕ್ತಿಯೆಂಬುದಾಗಿ ತಮ್ಮನ್ನು ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ತಮ್ಮ ಸಂಘದ ವಾರ್ಷಿಕೋತ್ಸವ ಕುರಿತ ಸುದ್ದಿಗೋಷ್ಟಿಯಲ್ಲಿ ನಿಂದಿಸಿದ್ದಾರೆ. ಇದು ಖಂಡನೀಯ ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.