ಶಾಸಕ ಶಿವಲಿಂಗೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ
Aug 26 2025, 01:02 AM ISTಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮತ್ತು ಸಾರ್ವಜನಿಕ ಹಿತದ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಜೆಡಿಎಸ್‌ನ ಮುಖಂಡ ಎನ್.ಆರ್. ಸಂತೋಷ್ ಆರೋಪಿಸಿದ್ದಾರೆ. ಬಾಣಾವರ ಗ್ರಾಮಪಂಚಾಯಿತಿಯಲ್ಲಿ ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ಗಂಭೀರ ಅವ್ಯವಹಾರ ನಡೆದಿದೆ. ನಕಲಿ ಪಟ್ಟಿ ಆಧಾರದಲ್ಲಿ 90 ಜನರಿಗೆ ತಲಾ ₹30,000 ರಂತೆ ₹27 ಲಕ್ಷ ಹಣ ಬಿಡುಗಡೆಯಾಗಿದೆ, ಇದರಿಂದ ಒಟ್ಟು ₹1.5 ಕೋಟಿ ತನಕ ಹಣ ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂದು ಅರೋಪಿಸಿದರು.