ಒಕ್ಕಲಿಗರ ನಾಯಕತ್ವ ಅಳಿಸಲು ಕಾಂಗ್ರೆಸ್ ಸಂಚು: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ
Mar 16 2024, 01:46 AM ISTಕಳೆದ ಮೂರು ತಿಂಗಳಿನಿಂದ ಇಡೀ ಜಿಲ್ಲೆಯ ಎಲ್ಲ ಮುಖಂಡರಿಗೂ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಾವೆಲ್ಲಿ ಮಾತನಾಡಿದರೆ ತಪ್ಪಾಗುತ್ತದೋ ಎಂದು ಸಾಮೂಹಿಕವಾಗಿ ಮೌನವಾಗಿದ್ದೆವು. ಇನ್ನು ಮೌನವಾಗಿರಲು ಸಾಧ್ಯವಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಅದೂ ಕಡಿಮೆ ಅಂತರದಿಂದ, ನೀವೆಲ್ಲಾ ಎಷ್ಟು ಮತಗಳಿಂದ ಸೋತಿದ್ದೀರಿ ಎಂಬುದನ್ನು ಜ್ಞಾಪಿಸಿಕೊಳ್ಳಿ.