ಉಡುಪಿ: ಪಿಪಿಸಿಯಲ್ಲಿ ಪಠ್ಯಸಂಬಂಧಿ ತಾಳಮದ್ದಳೆ ಕಾರ್ಯಾಗಾರ
Mar 14 2025, 12:30 AM ISTಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘಗಳ ಸಂಯೋಜನೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಸಿಎ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿರುವ ರಾಧಾಕೃಷ್ಣ ಕಲ್ಚಾರ್ ಅವರ ‘ಸಾಂಸ್ಕೃತಿಕ ಪಲ್ಲಟಗಳು ಮತ್ತು ತಾಳಮದ್ದಳೆ’ ಲೇಖನ ಹಾಗೂ ಪಾರ್ತಿಸುಬ್ಬ ಕವಿಯ ಪಂಚವಟಿ ಪ್ರಸಂಗದ ಪಠ್ಯವನ್ನು ಆಧರಿಸಿ ತಾಳಮದ್ದಳೆ ಕಾರ್ಯಾಗಾರ ಆಯೋಜಿಸಲಾಯಿತು.