ನ್ಯೂ ಮಿನರ್ವಾ ಮಿಲ್ ಮುಚ್ಚುವ ಭೀತಿಯಲ್ಲಿ ಕಾರ್ಮಿಕರು
Sep 26 2025, 01:00 AM ISTಹನುಮಂತಪುರ ಸಮೀಪ ಇರುವ ನ್ಯೂ ಮಿನರ್ವಾ ಮಿಲ್ ಮತ್ತು ರಾಷ್ಟ್ರೀಯ ಜವಳಿ ನಿಗಮ ಮುಚ್ಚಿರುವುದರಿಂದ ಕಾರ್ಮಿಕರ ಜೀವನ ಸ್ಥಿತಿ ಮತ್ತು ಕುಟುಂಬಗಳು ಅರ್ಥಿಕ ಸ್ಥಿತಿ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಘಟಕವನ್ನು ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ನ್ಯೂ ಮಿನರ್ವ ಮಿಲ್ ವರ್ಕರ್ಸ್ ಯೂನಿಯನ್‌ನಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡರು. ೧೯೩೬ರ ಉದ್ಯೋಗ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಉದ್ಯೋಗದಾತರು ಮಾಸಿಕ ಸಂಬಳ ಚೀಟಿಗಳನ್ನು ನೀಡಬೇಕಾದರೂ, ಹಾಸನದ ಮಿಲ್ ಆಡಳಿತವು ಈ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.