ಶಿಕ್ಷಣ, ಉತ್ತಮ ಆರೋಗ್ಯ ವಂಚಿತ ಕಾರ್ಮಿಕರು: ಕ್ಲಿಫ್ಟನ್ ರೊಜಾರಿಯೋ
May 03 2024, 01:03 AM ISTಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಅಖಿಲ ಭಾರತ ಕಾರ್ಮಿಕ ಸಂಘಟನೆ ವತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿಸಭೆ ನಡೆಯಿತು. ಇದಕ್ಕೂ ಮೊದಲು ಕಾರ್ಮಿಕರು ತಾಲೂಕು ಮೈದಾನದಿಂದ ಮೆರವಣಿಗೆ ಹೊರಟು ಗಡಿಯಾರ ಕಂಬದ ಬಳಿಯಿಂದ ಮುಖ್ಯರಸ್ತೆಯಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣ, ಸುಣ್ಣದಬೀದಿ, ಗೋಣಿಕೊಪ್ಪರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ದೊಡ್ಡಟಿಚೌಕಿ ಮಾರ್ಗವಾಗಿ ತಾಲೂಕು ಮೈದಾನದ ವರೆಗೂ ಮೆರವಣಿಗೆ ನಡೆಸಿದರು.