ಒಳ್ಳೆ ಕೆಲಸ ಕಾರ್ಯಗಳನ್ನು ಮಾಡುವುದು ರೂಢಿಸಿಕೊಳ್ಳಿರಿ
Mar 19 2024, 12:50 AM ISTಐಗಳಿ: ಹಸಿದ ಹೊಟ್ಟೆಗೆ ಅನ್ನ ನೀಡುವುದು, ಬಾಯಾರಿಕೆಯಿಂದ ಬಂದವರಿಗೆ ನೀರು ಕೊಡುವುದು, ಬಿಸಿಲಿನ ತಾಪದಲ್ಲಿಂದ ಬಂದವರಿಗೆ ನೆರಳಿನಲ್ಲಿ ಕರೆಯುವುದು, ಬಿದ್ದವರನ್ನು ಎಬ್ಬಿಸುವುದು, ಇಂತಹ ಕಾರ್ಯವನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಳ್ಳಿರಿ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು. ಸ್ಥಳೀಯ ಮಹಾ ತಪಸ್ವಿ ಜಂಗಮಜ್ಯೋತಿ ಲಿಂ.ಅಪ್ಪಯ್ಯ ಸ್ವಾಮಿಗಳ ಜಾತ್ರೆಯ ನಿಮಿತ್ತ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರಿಗೆ ಉಚಿತವಾಗಿ ಗ್ರಾಮದ ಅಲ್ಪಸಂಖ್ಯಾತರ ಮುಸ್ಲಿಂ ಭಾಂಧವರು ಮಜ್ಜಿಗೆ, ಶರಬತ್ತ, ಪಾನಕ ಇತ್ಯಾದಿ ವಿತರಿಸಿದರು.