ಕಥೆಗಳನ್ನು ಗುರುತಿಸುವ ಕೆಲಸ ಆಗಲಿ: ಜೋಗಿ
Jan 22 2024, 02:19 AM ISTಮಂಗಳೂರು ನಗರದಲ್ಲಿ ಮಂಗಳೂರು ಲಿಟ್ಫೆಸ್ಟ್ನ ಮೂರನೇ ದಿನವಾದ ಭಾನುವಾರ ‘ಕಥಾ ಸಮಯ’ ಗೋಷ್ಠಿಯಲ್ಲಿ ಕಥೆಗಾರ, ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ (ಗಿರೀಶ್ ರಾವ್ ಹತ್ವಾರ್) ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು. ಎಲ್ಲ ಭಾಷೆಗಳಲ್ಲೂ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿವೆ. ಕನ್ನಡದಲ್ಲೇ ತಿಂಗಳಿಗೆ ಏನಿಲ್ಲವೆಂದರೂ 100- 150ರಷ್ಟು ಕತೆಗಳು ಬರುತ್ತಿವೆ. ಅವುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಜೋಗಿ ಆಶಿಸಿದರು.