ಕೋವಿಡ್ ಹೊಸ ರೂಪಾಂತರಿ ಬಗ್ಗೆ ಎಚ್ಚರದ ಕೆಲಸ ಮಾಡಿ
Dec 23 2023, 01:47 AM ISTಹೊಸ ತಳಿ ಬಗ್ಗೆ ಹೆಚ್ಚಿನ ಭಯ ಬೇಡ. ಜನಸಾಮಾನ್ಯರಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕವೇ ರೋಗವನ್ನು ಮೊದಲಿಗೆ ನಿಯಂತ್ರಣಕ್ಕೆ ತರಬೇಕು. ನಂತರದಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕೋವಿಡ್ ಪರೀಕ್ಷೆ, ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿ ಸಿದ್ಧತೆ, ಔಷಧಿಗಳ ದಾಸ್ತಾನು ಇರುವಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ಕಾರಣಕ್ಕೂ ಸೌಲಭ್ಯಗಳ ಕೊರತೆ ಉಂಟಾಗಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದದಾರೆ.