ಚುನಾವಣೆ ಕರ್ತವ್ಯ ಮುಕ್ತಾಯ: ತಹಸೀಲ್ದಾರ್‌ಗಳಿಗೆ ಬೀಳ್ಕೊಡುಗೆ
Jun 16 2024, 01:49 AM ISTಲೋಕಸಭಾ ಚುನಾವಣೆ ಹಿನ್ನೆಲೆ ಬೇರೆಡೆಯಿಂದ ಹೊನ್ನಾಳಿಗೆ ವರ್ಗಾವಣೆಯಾಗಿ, ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ಪುರಂದರ ಹಾಗೂ ನ್ಯಾಮತಿ ತಾಲೂಕಿನ ತಹಸೀಲ್ದಾರ್ ಫಿರೋಜ್ ಷಾ ಅವರು ಚುನಾವಣೆ ಮುಕ್ತಾಯ ಹಿನ್ನೆಲೆ ಸರ್ಕಾರದ ಆದೇಶದಂತೆ ಪುರಂದರ ಅವರು ಪುತ್ತೂರು ಹಾಗೂ ಫಿರೋಜ್ ಷಾ ಅವರು ಬ್ಯಾಡಗಿ ತಾಲೂಕಿಗೆ ವರ್ಗಾವಣೆಗೊಂಡರು. ಈ ಹಿನ್ನೆಲೆ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಎಲ್ಲ ನೌಕರರು ಉಭಯ ತಹಸೀಲ್ದಾರರನ್ನು ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.