ರೈತರಿಗೆ ಜಾತಿ, ಪಕ್ಷದ ಹಂಗಿಲ್ಲ: ಶಾಸಕ ತಮ್ಮಯ್ಯ
Oct 21 2024, 12:33 AM IST ಚಿಕ್ಕಮಗಳೂರು, ರೈತರಿಗೆ ಯಾವುದೇ ಜಾತಿಯೂ ಇಲ್ಲ ಹಾಗೆ ಪಕ್ಷವೂ ಇಲ್ಲ. ರೈತರೇ ಒಂದು ಜಾತಿ ಹಾಗೂ ಪಕ್ಷ. ದೇಶದಲ್ಲಿ ಶೇ. 70 ರಷ್ಟಿರುವ ರೈತರು ಸಮೃದ್ಧಿ ಯಾಗಿರಬೇಕು. ಮಳೆ ಬಂದು ಉತ್ತಮ ಬೆಳೆ ಜೊತೆಗೆ ಬೆಳೆಗೆ ಉತ್ತಮ ಬೆಲೆಯೂ ಸಿಕ್ಕಾಗ ರೈತ ಸರ್ಕಾರದ ಯಾವುದೇ ಯೋಜನೆ ಗಳನ್ನು ಕೇಳುವುದಿಲ್ಲ. ಈ ಬಾರಿ ಮನುಷ್ಯ ಪ್ರಯತ್ನ ಮತ್ತು ದೈವ ಪ್ರಯತ್ನದಿಂದ ಕ್ಷೇತ್ರದ ಬರಗಾಲ ಪೀಡಿತ ಹೋಬಳಿಗಳಾದ ಲಕ್ಯಾ ಹಾಗೂ ಸಖರಾಯಪಟ್ಟಣ ಭಾಗದ ಕೆರೆಗಳು ಭರ್ತಿಯಾಗಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸಂತಸ ವ್ಯಕ್ತಪಡಿಸಿದರು.