ನಾನು ದೇವಸ್ಥಾನಕ್ಕೆ ಹೋದರೆ ಸಂಚಲನ ಆರಂಭ: ಡಿ.ಕೆ.ಶಿವಕುಮಾರ್
Mar 03 2025, 01:45 AM ISTಹಿಂದೆ ನನ್ನ ಕ್ಷೇತ್ರದಲ್ಲಿ ಏಸುವಿನ ವಿಗ್ರಹ ಸ್ಥಾಪನೆಗೆಸಹಾಯ ಮಾಡಿದ್ದಾಗ, ಕರಾವಳಿಯ ನಾಯಕರೊಬ್ಬರು ನನ್ನನ್ನು ಏಸುಕುಮಾರ ಎಂದು ಕರೆದಿದ್ದರು. ಯಾರೋ ಒಬ್ಬ ಸಂಸದ, ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ, ಬರೀ ಪಂಕ್ಚರ್ ಹಾಕೋಕೆ ಲಾಯಕ್ಕು ಎಂದಿದ್ದ, ಆಗ ಅವರೆಲ್ಲ ನಮ್ಮ ಬ್ರದರ್ಸ್ ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ, ಅದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೀತಾರೆ ಎಂದು ಡಿಕೆಶಿ ಹೇಳಿದ್ದಾರೆ.