ಮಣ್ಣ ಬಿಟ್ಟು ಮಡಕೆ ಇಲ್ಲ, ಹಿರಿಯರ ಬಿಟ್ಟು ದೇವರಿಲ್ಲ ಇಲ್ಲ. ಇದೊಂದು ಅತ್ಯಂತ ಪ್ರಚಲಿತದಲ್ಲಿರುವ ಗಾದೆ ಮಾತು. ಈ ಗಾದೆ ನನ್ನ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ. ವಿದ್ಯಾರ್ಥಿ ಕಾಂಗ್ರೆಸ್‌ನಲ್ಲಿದ್ದ ನನಗೆ ಕರೆದು ದೇವೇಗೌಡ್ರ ಎದುರು ಸ್ಪರ್ಧಿಸುವಂತೆ ಟಿಕೆಟ್ ನೀಡಿದ್ದು ಕೆ.ಎಚ್. ಪಾಟೀಲ ಅವರು
ಡಿ.ಕೆ.ಶಿವಕುಮಾರ್ ಅವರೇ ಏನಿವತ್ತು ಬಹಳ ಪ್ರಸನ್ನವದನರಾಗಿದ್ದೀರಿ, ನಿನ್ನೆ ತಾನೆ ಶಾಸಕರಿಗೆ ಔತಣಕೂಟ ನೀಡಿದ್ದೀರಿ. ಏನಾದ್ರೂ ಶುಭ ಶಕುನ ಸಿಕ್ಕಿದೆಯಾ? ನಮ್ಮ ಬಳಿಯೂ ಸ್ವಲ್ಪ ಆ ಆನಂದ ಹಂಚಿಕೊಳ್ಳಿ ಎಂದು ಕೆಲ ಬಿಜೆಪಿ ಸದಸ್ಯರು ಕಿಚಾಯಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.
‘ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದು, ದೊಡ್ಡ ಮಾಫಿಯಾ. ಮಿಟ್ಟಗಾನಹಳ್ಳಿ ತ್ಯಾಜ್ಯ ಘಟಕವನ್ನು ನಾಲ್ಕು ಕಡೆಗೆ ವರ್ಗಾಯಿಸೋಣ ಎಂದರೆ ಆಗುತ್ತಿಲ್ಲ. ಒಂದೆಡೆ ಪ್ರಕರಣ ನ್ಯಾಯಾಲಯದಲ್ಲಿದೆ.
ಸಂಚಾರ ದಟ್ಟಣೆ ನಿವಾರಿಸಲು ರಾಜ್ಯ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್ ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಲಸ ಮಾಡದೇ ದೂರುವವರ ಬಗ್ಗೆ ಏನೂ ಮಾತನಾಡದಿರುವುದೇ ಒಳ್ಳೆಯದು ಎಂದು ಡಿ ಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಹರಿಹಾಯ್ದರು.