ಮೈಸೂರು ದಸರಾ ಉದ್ಘಾಟನೆ ತಿಮ್ಮಕ್ಕಗೆ ನೀಡಲಿ
Aug 21 2025, 01:00 AM ISTಬೇಲೂರು ತಾಲೂಕು ಕಚೇರಿ ಮುಂಭಾಗದಲ್ಲಿ ನಾಡೋಜ ಸಾಲುಮರದ ತಿಮ್ಮಕ್ಕರವರು ನೆಟ್ಟು ಬೆಳೆಸಿದ್ದ ಮರಗಳನ್ನು ತೆರವು ಮಾಡಿರುವ ತಹಸೀಲ್ದಾರ್‌ರನ್ನು ಅಮಾನತು ಮಾಡಬೇಕು ಹಾಗೂ ಈ ವರ್ಷದ ಮೈಸೂರು ದಸರಾ ಉದ್ಘಾಟನೆಯನ್ನು ನಾಡೋಜ ಸಾಲುಮರದ ತಿಮ್ಮಕ್ಕರವರ ಅಮೃತ ಹಸ್ತದಿಂದ ನೆರವೇರಿಸಲು ಸರಕಾರ ಮುಂದಾಗಬೇಕು ಎಂದು ಮಲೆನಾಡು ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಬಿ.ಎಸ್. ದರ್ಶನ್ ಆಗ್ರಹಿಸಿದರು.