ಕರ್ನಾಟಕ ಸರ್ಕಾರವು ಈ ವರ್ಷ ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಾ ರಾಜಕೀಯವು ನಡೆಯುತ್ತಿರುವ ಸಂಗತಿ ತೀವ್ರ ಬೇಸರ ತಂದಿದೆ.
ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದಲ್ಲಿ ನಾಡಿಗೆ ಆಗಮಿಸಿರುವ 5 ಆನೆಗಳ ತೂಕ ಪರೀಕ್ಷೆಯಲ್ಲಿ ಸುಗ್ರೀವ ಆನೆಯು ಬಲಶಾಲಿಯಾಗಿ ಹೊರ ಹೊಮ್ಮಿತು. ಕೇವಲ 5 ಕೆ.ಜಿ. ವ್ಯತ್ಯಾಸದಿಂದ ಅಜಾನುಬಾಹು ಶ್ರೀಕಂಠ ಆನೆಯು 2ನೇ ಸ್ಥಾನ ಪಡೆಯಿತು.
ಹಿಂದೂ, ಮುಸ್ಲಿಂ ಎಂದು ಬೇರ್ಪಡಿಸುವುದು ಸರಿಯಲ್ಲ. ನಾವೆಲ್ಲರೂ ಒಂದೇ. ಈ ಬಾರಿ ದಸರಾ ಮಹೋತ್ಸವ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಅವಕಾಶ ನೀಡಿರುವುದನ್ನು ಯಾರೂ ವಿರೋಧಿಸಬಾರದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಬೆಂಬಲ ಸೂಚಿಸಿದರು.