ಠಾಣೆ ಮೇಲೆ ದಾಳಿ, ಪೊಲೀಸರಿಗೆ ಹಲ್ಲೆ ಹೇಯ ಕೃತ್ಯ: ಮಾಡಾಳು ವಿರೂಪಾಕ್ಷಪ್ಪ
May 27 2024, 01:12 AM ISTಚನ್ನಗಿರಿ ತಾಲೂಕಿನ ಇತಿಹಾಸದಲ್ಲಿ ಎಂದೂ ನಡೆಯದಂಥ ಕೃತ್ಯ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ನಡೆದಿದೆ. ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸ್ ವಾಹನಗಳ ಜಖಂ, ವಾಹನಗಳ ಸುಡುವ ಪ್ರಯತ್ನ, ಪೊಲೀಸರ ಮೇಲೆ ಹಲ್ಲೆ ಘಟನೆಗಳು ಶುಕ್ರವಾರ ರಾತ್ರಿ ನಡೆದಿರುವುದು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ.