ನೀರು ಸಮಸ್ಯೆ ನೀಗಿಸಿದ ನಗರಸಭೆ
Mar 29 2024, 12:52 AM ISTಸಕಾಲಕ್ಕೆ ಮಳೆಯಾಗದ್ದರಿಂದ ಎಲ್ಲೆಡೆ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಭೀಕರ ಬರಗಾಲ ಹಾಗೂ ಬೇಸಿಗೆಯ ಹೆಚ್ಚಿನ ತಾಪಮಾನದಿಂದ ಜಲಮೂಲಗಳು ಬತ್ತುತ್ತಿದ್ದು, ಅಂತರ್ಜಲಮಟ್ಟ ಕುಸಿಯುತ್ತಿದೆ. ಬೋರ್‌ವೆಲ್‌ಗಳು ಸರಿಯಾಗಿ ನೀರು ನೀಡುತ್ತಿಲ್ಲ. ಇದರಿಂದ ಮುಧೋಳ ಸೇರಿದಂತೆ ಎಲ್ಲೆಡೆ ನೀರು ಪೂರೈಸುವುದೇ ಹರಸಾಹಸ ಆಗಿದೆ. ಆದರೂ ನಗರಸಭೆಯ ಅಗತ್ಯ ಕ್ರಮಗಳಿಂದಾಗಿ ಜನರ ನೀರಿನ ಭವಣೆ ಅಲ್ಪಮಟ್ಟಿಗೆ ದೂರವಾಗುತ್ತಿದೆ.