ಹೇಮಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ: ಮಂದಗೆರೆ ಪಾತ್ರದ ಜಮೀನುಗಳಿಗೆ ಜಲಕಂಟಕ
Aug 03 2024, 12:33 AM ISTಚಿಕ್ಕಮಂದಗೆರೆಯ ಮಂಜುನಾಥ್ ಅವರ ತೋಟಕ್ಕೆ ನೀರು ನುಗ್ಗಿರುವುದಲ್ಲದೆ ಇವರ ಮನೆಯ ಕೊಟ್ಟಿಗೆ ಅರ್ಧ ಭಾಗ ಮುಳುಗಡೆಯಾಗಿದೆ. ರಾತ್ರಿಯಾದ ಕಾರಣ ರೈತ ಮಂಜುನಾಥ್ ಅವರ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಪರದಾಡಿದ್ದಾರೆ. ಬೇವಿನಹಳ್ಳಿಯ ಪಾಪನಾಯ್ಕ, ಪುಟ್ಟನಾಯ್ಕ, ಪಾಪನಾಯ್ಕ, ಸಣ್ಣನಾಯ್ಕ ಅವರ ಭತ್ತ, ಜೋಳ, ತೆಂಗಿನತೋಟಕ್ಕೆ ನೀರು ನುಗ್ಗಿ ಜೋಳದ ಬೆಳೆ ಕೊಚ್ಚಿ ಹೋಗಿದೆ. ಸಾಕಷ್ಟು ರೈತರ ಪಂಪ್ ಸೆಟ್, ಪಂಪ್‌ಸೆಟ್ ಮನೆಗಳು ಹಾಳಾಗಿವೆ.