ಪೊಲೀಸ್-ಜನಸಮುದಾಯದ ನಡುವೆ ನಿಕಟ ಸಂಬಂಧ ಇರಲಿ
Oct 22 2023, 01:01 AM ISTಬಳ್ಳಾರಿ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮ ದಿನಾಚರಣೆ ನಡೆಯಿತು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಪಾಲ್ಗೊಂಡು ಮಾತನಾಡಿ, ಪೊಲೀಸ್ ಮತ್ತು ಜನಸಮುದಾಯದ ನಡುವಿನ ಸಂಬಂಧ ನಿಕಟವಾಗಿರಬೇಕು ಹಾಗೂ ಪರಸ್ಪರ ನಂಬಿಕೆಗಳು ಬೆಳೆಯಬೇಕು ಎಂದು ಆಶಿಸಿದರು. ಸಮಾರಂಭದಲ್ಲಿ ಹಾಜರಿದ್ದ ನಗರದ ಗಣ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಬಾರಿ ಕುಶಾಲುತೋಪು ಹಾರಿಸುವ ಮೂಲಕ ಸಂತಾಪ ಸೂಚಿಸಲಾಯಿತು.