ಆಸ್ತಿಗಾಗಿ ಪೋಷಕರ ಮೇಲೆ ಮಕ್ಕಳಿಂದ ಪ್ರಕರಣ ದಾಖಲು
Sep 28 2024, 01:20 AM ISTಮಕ್ಕಳಿಂದ ಜೀವನಾಂಶ ಪಡೆಯಲು ಪೋಷಕರಿಗೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಜೀವನಾಂಶ ಕೇಳುವ ಕೇಸುಗಳು ಅಷ್ಟಾಗಿ ನ್ಯಾಯಾಲಯಕ್ಕೆ ಬಂದಿಲ್ಲ. ಆದರೆ ಮಕ್ಕಳು ಆಸ್ತಿಗಾಗಿ ತಂದೆ, ತಾಯಿ ಮೇಲೆ ಪ್ರಕರಣ ದಾಖಲು ಮಾಡುವುದು ದಿನೇ ದಿನೇ ಹೆಚ್ಚುತ್ತಿದೆ. ಇದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.