ಸೈಬರ್ ಕ್ರೈಂ ಹೆಚ್ಚುತ್ತಿರುವ ಪ್ರಕರಣ: ಜಾಗೃತರಾಗಲು ಎಸ್ಪಿ ಡಾ. ವಿಕ್ರಂ ಅಮಟೆ ಕರೆ
Jun 22 2024, 12:45 AM ISTಚಿಕ್ಕಮಗಳೂರು, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷದಲ್ಲಿ ಈವರೆಗೆ 31 ಪ್ರಕರಣಗಳು ದಾಖಲಾಗಿವೆ, ಜನರು ಸುಮಾರು ₹ 2.45 ಕೋಟಿ ಕಳೆದುಕೊಂಡಿದ್ದಾರೆ. ಈ ರೀತಿ ವಂಚನೆಗೆ ಒಳಗಾಗುತ್ತಿರುವವರ ಪೈಕಿ ವಿದ್ಯಾವಂತರೆ ಹೆಚ್ಚು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.