ಸಮೀವುಲ್ಲಾ ಮಸೀದಿಗೆ ಬಂದು ಪ್ರಮಾಣ ಮಾಡಲಿ

Sep 10 2024, 01:40 AM IST
ಕೆಲ ದಿನಗಳ ಹಿಂದೆ ನಡೆದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಸಮೀವುಲ್ಲಾ ಸದಸ್ಯರನ್ನು ಹಿಡಿದಿಟ್ಟುಕೊಂಡು ಕುತಂತ್ರ ರಾಜಕಾರಣ ಮಾಡುವ ಮೂಲಕ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ಕೊಡುಗೆ ಶೂನ್ಯ. ಈ ಹಿಂದೆ ಪರಿಶಿಷ್ಟ ಪಂಗಡದ ವ್ಯಕ್ತಿ ನಗರಸಭೆ ಅಧ್ಯಕ್ಷನಾದ ಕಾರಣ ಅದನ್ನು ಸಹಿಸಿಕೊಳ್ಳದೆ ಷಡ್ಯಂತ್ರ ರಾಜಕೀಯ ಮಾಡಿದ್ದಾರೆ. ಪರಿಶಿಷ್ಟ ಪಂಗಡದ ವ್ಯಕ್ತಿ ನಗರಸಭೆ ಅಧ್ಯಕ್ಷನಾದ ಎಂಬ ಕಾರಣಕ್ಕೆ ತನ್ನ ಅಧಿಕಾರದ ಹತ್ತು ತಿಂಗಳ ಅವಧಿಯುದ್ದಕ್ಕೂ ಇನ್ನಿಲ್ಲದ ಕಿರುಕುಳ ನೀಡಿ ಸಾಕಷ್ಟು ತೊಂದರೆ ನೀಡಿದ್ದಾರೆ. ನಾನು ನನ್ನ ಅವಧಿಯಲ್ಲಿ ಕೆಲಸ ಮಾಡಿಲ್ಲ ಎಂದು ಸಮೀವುಲ್ಲಾ ಮಸೀದಿಯಲ್ಲಿ ಪ್ರಮಾಣ ಮಾಡಲಿ ಎಂದು ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಸವಾಲು ಹಾಕಿದರು.