ರಬಕವಿ-ಬನಹಟ್ಟಿ ತಾಲೂಕಲ್ಲಿ ಪ್ರವಾಹ ಭೀತಿ
Jul 30 2024, 12:35 AM ISTಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಸೋಮವಾರ ಸಂಜೆಯ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಸೋಮವಾರ ಬೆಳಗಿನಿಂದ ನದಿ ನೀರು ಇಳಿಯಬಹುದು ಎಂದು ತಾಲೂಕಿನ ಅಸ್ಕಿ, ಆಸಂಗಿ, ತಮದಡ್ಡಿ ಸೇರಿದಂತೆ ನದಿ ಪಾತ್ರದ ಜನ ಊಹಿಸಿದ್ದರು. ಆದರೆ ಬೆಳಗಿನಿಂದ ಒಂದು ಅಡಿಗೂ ಹೆಚ್ಚು ನೀರು ಏರಿಕೆಯಾಗಿದೆ ಎಂದು ಅಸ್ಕಿ ಗ್ರಾಮದ ತೋಟದ ನಿವಾಸಿ ಹಣಮಂತ ತಳವಾರ ಹೇಳಿದ್ದಾರೆ.