ಎಲ್ಲ ದರಗಳ ಏರಿಕೆ ಮಧ್ಯೆಯೇ ಲೀ. ಹಾಲು ಹೆಚ್ಚಳ ಖಂಡನೀಯ: ಬಿಜೆಪಿ
Jun 27 2024, 01:11 AM ISTಬಿತ್ತನೆ ಬೀಜ, ಪೆಟ್ರೋಲ್ ಡೀಸೆಲ್, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ ಬೆಲೆ ಹೆಚ್ಚಳ ಮಾಡಿ ಜನರ ಮೇಲೆ ಹೊರೆ ಏರಿಕೆ ಮಾಡಿದ್ದ ರಾಜ್ಯದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿನಿಂದ ಹಾಲಿನ ದರ ಹೆಚ್ಚು ಮಾಡಿದೆ. ಇದರಿಂದ ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಖಂಡಿಸಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್ ತಿಳಿಸಿದ್ದಾರೆ.