ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಬಿಜೆಪಿ ವ್ಯವಸ್ಥೆ
Jan 03 2024, 01:45 AM ISTಜ.25ರಿಂದ 60 ದಿನಗಳ ಕಾಲ ಮಹಾ ಸಂಪರ್ಕ ಅಭಿಯಾನ ನಡೆಸಲು ಬಿಜೆಪಿ ಉದ್ದೇಶಿಸಿದ್ದು, ಅದರ ಭಾಗವಾಗಿ ಅಯೋಧ್ಯೆಗೆ ಪ್ರತಿದಿನ 35 ರೈಲುಗಳ ಸಂಚಾರ ನಡೆಸುವಂತೆ ಮನವಿ ಮಾಡಲಾಗುವುದು. ಅಲ್ಲದೆ ಪ್ರತಿದಿನ 50 ಸಾವಿರ ಜನರಿಗೆ ದರ್ಶನ ಮಾಡಿಸಲು ಪಣತೊಡಬೇಕು. ಪ್ರಯಾಣ ವೆಚ್ಚ ಭಕ್ತರದ್ದು, ಅನುಕೂಲ ಕಲ್ಪಿಸುವ ಹೊಣೆ ಬಿಜೆಪಿಗರದ್ದು ಎಂಬ ಸಹಕಾರ ತತ್ವದ ಮೂಲಕ ಹೆಚ್ಚು ಜನರಿಗೆ ರಾಮನ ದರ್ಶನ ಮಾಡಿಸಲು ಬಿಜೆಪಿ ನಿರ್ಣಯ ತೆಗೆದುಕೊಂಡಿದೆ.