ಮೋದಿಗಾಗಿ ಮಾತಾ ರಾಜಲಕ್ಷ್ಮೀ ಬೈಕ್ ಯಾತ್ರೆ

Mar 12 2024, 02:05 AM IST
ವಿಜಯಪುರ: ಬಲಿಷ್ಠ ಭಾರತ ದೇಶಕ್ಕಾಗಿ ಮತ್ತೊಮ್ಮೆ ಮೋದಿಗೆ ಮತ ನೀಡಿ ಎಂಬ ಜನರ ಅಭಿಪ್ರಾಯಕ್ಕಾಗಿ ಸಾದ್ವಿ ಮಾತಾ ರಾಜಲಕ್ಷ್ಮೀ ಬುಲೆಟ್ ಬೈಕ್ ಯಾತ್ರೆ ನಡೆಸುತ್ತಿದ್ದಾರೆ. ತಮಿಳುನಾಡು ರಾಜ್ಯದಿಂದ ಈ ಯಾತ್ರೆ ಪ್ರಾರಂಭವಾಗಿದ್ದು, 15 ರಾಜ್ಯಗಳ ಮುಖಾಂತರ 21 ಸಾವಿರ ಕಿಮೀ ಬೈಕ್ ಯಾತ್ರೆ ನಡೆಸಲಾಗುತ್ತಿದೆ. ಈ ಯಾತ್ರೆ ಏ.18 ಕ್ಕೆ ದೆಹಲಿಗೆ ತಲುಪುವಂತೆ ಯೋಜನೆ ಹಾಕಿಕೊಳ್ಳಲಾಗಿದೆ. ಇದೀಗ ವಿಜಯಪುರ ನಗರಕ್ಕೆ ಈ ಯಾತ್ರೆಯು ಪ್ರವೇಶಿಸಿದ್ದು, ಸಾದ್ವಿ ಮಾತಾ ರಾಜಲಕ್ಷ್ಮೀ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಉಪಾಧ್ಯಕ್ಷ ಶ್ರೀಧರ ಬಿಜ್ಜರಗಿ ನೇತೃತ್ವದಲ್ಲಿ ನಗರಕ್ಕೆ ಭವ್ಯ ಸ್ವಾಗತ ಕೋರಲಾಯಿತು.