ಕಳ್ಳತನದ ಯತ್ನ ವಿಫಲ: ಸ್ಥಳದಲ್ಲಿಯೇ ಬೈಕ್ ಬಿಟ್ಟು ಪರಾರಿಯಾದ ಕದೀಮ

Dec 15 2023, 01:30 AM IST
ನಕಪುರ:ಕಳ್ಳತನ ಮಾಡಲು ನಡೆಸಿದ ಯತ್ನ ವಿಫಲವಾಗಿ ಕದೀಮ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ನಡೆದಿದೆ.ವಿವೇಕಾನಂದ ನಗರದ ನಾಲ್ಕನೇ ರಸ್ತೆಯ ನಿವಾಸಿ ಕಲೀಲ್ ಎಂಬುವರ ಮನೆಯಲ್ಲಿ ಬುಧವಾರ ಕಳ್ಳತನದ ವಿಫಲ ಯತ್ನ ನಡೆದಿದೆ, ರಾತ್ರಿ ಸುಮಾರು12 ರ ಸಮಯದಲ್ಲಿ ಕದೀಮನು, ಕಲೀಲ್ ಅವರ ಮನೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನುನಿಲ್ಲಿಸಿ ಮೊದಲನೇ ಮಹಡಿ ಮೇಲಿರುವ ಕಲೀಲ್ ಅವರ ಮನೆಗೆ ಕಳ್ಳತನ ಮಾಡುವ ಯತ್ನದಲ್ಲಿದ್ದ, ಅದೇ ಸಮಯಕ್ಕೆ ಕಲೀಲ್ ಅವರ ತಾಯಿ ಹೊರಗಡೆ ಬಂದಾಗ ಕಳ್ಳತನ ಮಾಡಲು ಬಂದಿದ್ದ ಖದೀಮ ಮೊದಲನೇ ಮಹಡಿ ಯಿಂದ ರಸ್ತೆಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.