ಭಾರತೀಯ ನಾರಿಗೆ ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಇದೆ
Aug 11 2025, 12:30 AM IST ಬಾಲ್ಯದಿಂದ ಹಿಡಿದು ಪ್ರಾಯಕ್ಕೆ ಬಂದ ನಂತರ ಗೃಹಿಣಿಯಾಗಿ, ಮಕ್ಕಳ ತಾಯಿಯಾಗಿ ವಿವಿಧ ಕಾಲಘಟ್ಟಗಳಲ್ಲಿ ಭಾರತೀಯ ಮಹಿಳೆ ವಿವಾಹದ ನಂತರ ಪುರುಷರಿಗಿಂತ ಹೆಚ್ಚು ಜವಬ್ದಾರಿ ಹೊತ್ತಿರುತ್ತಾಳೆ ಎಂದು ಪ್ರಸೂತಿ ತಜ್ಞೆ ಡಾ. ರಂಗಲಕ್ಷ್ಮಿ ಅಭಿಪ್ರಾಯಪಟ್ಟರು. ನಿಗದಿತ ಅವಧಿಯಲ್ಲಿ ಪ್ರತಿಯೊಬ್ಬ ಸ್ತ್ರೀ ಸ್ತನ ಕ್ಯಾನ್ಸರ್, ಗರ್ಭ ಕೊರಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಸೂಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಮುಂದೆ ಬರುವ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದು. ಪ್ಯಾಪ್ ಸ್ಮಿಯರ್, ಮೆಮೊಗ್ರಫಿಯಂತಹ ತಪಾಸಣೆಗೆ ನಾಚಿಕೆಯನ್ನು ಸರಿಸಿ ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು ಎಂದು ಹೇಳಿದರು.