ಮಳೆ ಪರಿಸ್ಥಿತಿ ಅವಲೋಕಿಸಿ, ಕ್ರಮ ಕೈಗೊಳ್ಳಿ: ಶಾಸಕ
Jul 21 2024, 01:15 AM ISTಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗುತ್ತಿದೆ. ಹೊನ್ನಾಳಿಯಲ್ಲಿ ಈಗಾಗಲೇ ತುಂಗಭದ್ರಾ ನದಿ ನೀರಿನಮಟ್ಟ ಯಾವುದೇ ಸಮಯದಲ್ಲಿ ಅಪಾಯದ ಮಟ್ಟ ತಲುಪಬಹುದು. ಜೊತೆಗೆ ಆಸ್ತಿಗಳಿಗೆ ಹಾನಿಯಾಗುವ ಸಂಭವವಿದೆ. ಕಂದಾಯ, ಪುರಸಭೆ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿರಬೇಕು. ನಿರಂತರ ಪರಿಸ್ಥಿತಿ ಅವಲೋಕಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ತಾಕೀತು ಮಾಡಿದ್ದಾರೆ.