ಹಾಸನದಲ್ಲಿ ಆರ್ಭಟಿಸಿದ ಪುನರ್ವಸು ಮಳೆ
Jul 19 2024, 12:48 AM IST ಈ ಹಿಂದಿನ ಯಾವ ಆಷಾಢದಲ್ಲೂ ಹಾಸನ ನಗರದಲ್ಲಿ ಈ ರೀತಿಯ ಸೋನೆ ಮಳೆ ಸುರಿದಿರಲಿಲ್ಲ. ಕಳೆದ ವರ್ಷವಂತೂ ಇದೀಗ ಬರುತ್ತಿರುವ ಮಳೆಯ ಅರ್ಧ ಭಾಗವೂ ಬರಲಿಲ್ಲ. ಆದರೆ ಈ ಬಾರಿ ಮಳೆಯ ಜತೆಗೆ ಸಂಪೂರ್ಣ ಮೋಡ ಮುಸುಕಿದ ವಾತಾವರಣ. ಆದರೆ ಚಳಿ ಇಲ್ಲ. ಇಂತಹ ವಾತಾವರಣ ಸಕಲೇಶಪುರ, ಚಿಕ್ಕಮಗಳೂರು, ಮಡಿಕೇರಿಗಳಲ್ಲಿ ಕಾಣಸಿಗುತ್ತಿತ್ತು. ಅದನ್ನು ನೋಡಲೆಂದೇ ಇಲ್ಲಿನ ಜನರು ಅಲ್ಲಿಗೆ ಹೋಗುತ್ತಿದ್ದರು. ಆದರೆ, ಮಲೆನಾಡ ಅನುಭವವನ್ನು ಈ ಬಾರಿ ಇಲ್ಲಿಯೇ ಅನುಭವಿಸುವಂತಾಗಿದೆ.