• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಳಿದ ಮಳೆ, ನದಿಗಳಲ್ಲಿ ನೀರಿನ ಮಟ್ಟ ಇಳಿಕೆ

Jul 24 2024, 12:23 AM IST
ಮಂಗಳವಾರ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ಆಗೊಮ್ಮೆ ಈಗೊಮ್ಮೆ ಮಾತ್ರ ಮಳೆ ಬರುತ್ತಿದೆ. ಗಂಗಾವಳಿ, ಅಘನಾಶಿನಿ, ಚಂಡಿಕಾ, ಗುಂಡಬಾಳ, ಬಡಗಣಿ ನದಿಗಳ ನೀರಿನ ಮಟ್ಟ ಇಳಿದಿದೆ.

ಭಾರಿ ಮಳೆ: ಕೊಳೆ ರೋಗಕ್ಕೆ ಕಾಫಿ ಫಸಲು ಧರಾಶಾಹಿ

Jul 24 2024, 12:18 AM IST
ಕೊಡಗು ಜಿಲ್ಲೆಯ ಎಲ್ಲೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿದ್ದು ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಮಿಡಿಗಳು ಉದುರುವಿಕೆಯ ಪ್ರಮಾಣ ಹೆಚ್ಚಾಗಿದೆ. ಕೆಲವು ಗಿಡಗಳಲ್ಲಿ ಕಾಫಿಯ ಫಸಲು ಬಹುತೇಕ ಧಾರಾಶಾಹಿಯಾಗಿದೆ. ಕೊಳೆರೋಗದಿಂದ ಕಾಫಿಯ ಗಿಡಗಳ ರೆಂಬೆಗಳಲ್ಲಿನ ಫಸಲು ಕಪ್ಪಾಗಿ ಕಾಫಿಯ ಮಿಡಿಗಳು ಇನ್ನಷ್ಟು ಉದುರಿ ಇತರ ಗಿಡಗಳಿಗೂ ಪಸರಿಸುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಉಡುಪಿ: ಜಿಲ್ಲೆಯಲ್ಲಿ ಉತ್ತಮ ಮಳೆ, 24 ಮನೆಗಳಿಗೆ ಹಾನಿ

Jul 24 2024, 12:18 AM IST
ಸೋಮವಾರ ರಾತ್ರಿಯ ಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ದ್ವಂಸವಾಗಿದ್ದು, ಒಟ್ಟು 24 ಮನೆಗಳಿಗೆ ಹಾನಿಯಾಗಿ ಸುಮಾರು 13 ಲಕ್ಷ ರು.ಗಳಿಗೂ ಅಧಿಕ ಹಾನಿಯನ್ನು ಅಂದಾಜಿಸಲಾಗಿದೆ.

ಚನ್ನಗಿರಿ ತಾಲೂಕಿನಲ್ಲಿ ಶೇ.63.2 ಮಳೆ: 22 ಮನೆಗಳಿಗೆ ಹಾನಿ

Jul 24 2024, 12:17 AM IST
ಚನ್ನಗಿರಿ ತಾಲೂಕಿನಲ್ಲಿ 15 ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರ ಮತ್ತು ಮಂಗಳವಾರ ಸುರಿದ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 22 ಮನೆಗಳು ಭಾಗಶಃ ಬಿದ್ದಿವೆ. ರಾತ್ರಿ-ಬೆಳಗ್ಗೆ ಎನ್ನದೇ ಮಳೆ ಮುಂದುವರಿದಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ತಗ್ಗಿದ ಮಳೆ-ಮುಂದುವರಿದ ಮನೆ, ಬೆಳೆ ಹಾನಿ

Jul 24 2024, 12:15 AM IST
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಹಿಡಿದಿದ್ದ ಜಿಟಿಜಿಟಿ ಮಳೆ ಮಂಗಳವಾರ ತಗ್ಗಿದೆ. ಆದರೆ, ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಹರಿದಿರುವ ನದಿಗಳ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಹಾಸನದಲ್ಲಿ ಕೊಂಚ ತಗ್ಗಿದ ಮಳೆ

Jul 23 2024, 12:40 AM IST
ಕಳೆದ ಹದಿನೈದು ದಿನಗಳ ಹಿಂದಿದ್ದ ವಾತಾವರಣ ಈಗಿಲ್ಲ. ಮಳೆ ಈಗ ಕೊಂಚ ಬಿಡುವು ನೀಡಿದೆ. ಆದರೆ ಹದಿನೈದು ದಿನಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಮುಸುಕಿನ ಜೋಳ, ಶುಂಠಿ, ಆಲೂಗಡ್ಡೆ ಬೆಳೆಗಳು ಹಲವು ರೋಗಗಳಿಗೆ ಸಿಲುಕಿ ಬಹುತೇಕ ಹಾನಿಗೀಡಾಗಿವೆ. ಇದರೊಂದಿಗೆ ಪುರ್ನವಸು ಮಳೆ ರೈತರ ತಲೆ ಮೇಲೆ ಚಪ್ಪಡಿ ಎಳೆದಿದೆ.

ಮಳೆ: ಜಿಲ್ಲೆಯಲ್ಲಿ ₹100 ಕೋಟಿಗೂ ಹೆಚ್ಚು ನಷ್ಟ

Jul 23 2024, 12:39 AM IST
ಚಿಕ್ಕಮಗಳೂರು, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗೂ ಮೀರಿ ಮಳೆ ಬಂದಿದೆ. ಮಳೆಯಿಂದ ಈವರೆಗೆ ಸುಮಾರು 100 ಕೋಟಿ ರು. ನಷ್ಟವಾಗಿದೆ. ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹೇಳಿದರು.

ಬಿಡುವು ನೀಡಿ ಸುರಿದ ಮಳೆ, ಗಾಳಿ ಹೆಚ್ಚು: ನಿಲ್ಲದ ಹಾನಿ

Jul 23 2024, 12:38 AM IST
ಜಿಲ್ಲೆಯಲ್ಲಿ ಸೋಮವಾರ ಮಳೆ ಪ್ರಮಾಣ ಇಳಿಮುಖವಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಹ ಕೂಡ ಇಳಿಕೆಯಾಗಿದೆ.

ಮುಂದುವರಿದ ಮಳೆ ಅನಾಹುತ, ಮರ ಉರುಳಿ ಬೈಕ್‌ ಸವಾರರಿಬ್ಬರು ಸಾವು

Jul 23 2024, 12:36 AM IST
ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ ಅನಾಹುತ ಮುಂದುವರಿದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಬೃಹತ್‌ ಮರವೊಂದು ಉರುಳಿಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿರೇಕೆರೂರಿನಲ್ಲಿ ಸಂಭವಿಸಿದೆ. ವರದಾ ನದಿ ಪ್ರವಾಹದಿಂದ ತಾಲೂಕಿನ ಹೊಸರಿತ್ತಿಯ ಮಂತ್ರಾಲಯ ರಾಘವೇಂದ್ರ ಮೂಲ ಸಂಸ್ಥಾನ ಮಠ ಜಲಾವೃತಗೊಂಡಿದೆ. ನದಿ ತೀರದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ.

ಜಿಲ್ಲೆಯಲ್ಲಿ ಶೇ.57ರಷ್ಟು ಹೆಚ್ಚು ಮಳೆ: 3 ಸಾವು

Jul 23 2024, 12:33 AM IST
ವಾರಗಟ್ಟಲೇ ನಿರಂತರವಾಗಿ ಸುರಿದ ಮಳೆಗೆ ಮೂರು ಮಂದಿ, 6 ಜಾನುವಾರು ಸಾವನ್ನಪ್ಪಿದ್ದರೆ, 7 ಮನೆ ಪೂರ್ಣ ಹಾನಿ, 130 ಮನೆ ಭಾಗಶಃ ಹಾನಿಯಾಗಿವೆ. 610 ಹೇಕ್ಟೆರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿದೆ.
  • < previous
  • 1
  • ...
  • 43
  • 44
  • 45
  • 46
  • 47
  • 48
  • 49
  • 50
  • 51
  • ...
  • 102
  • next >

More Trending News

Top Stories
ಮೇ 27ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ
8 ನೆಲೆಗೆ ದಾಳಿ ಮಾಡಿ ಪಾಕ್‌ ವಾಯುಸೇನೆ ನಡು ಮುರಿದ ಭಾರತ
ಪಾಕಿಸ್ತಾನದ ಕಪಟ ಕದನ ವಿರಾಮ
ದಿಲ್ಲಿ ಮೇಲೂ ದಾಳಿಗೆ ಪಾಕ್‌ ಯತ್ನ
8500 ಕೋಟಿ ಐಎಂಎಫ್‌ಸಾಲದ ಭಿಕ್ಷೆಗಾಗಿ ಕದನವಿರಾಮಕ್ಕೆ ಒಪ್ಪಿದ್ದ ಪಾಕ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved