ವಿವಿಧೆಡೆ ಭಾರೀ ಮಳೆ, ತುಂಬಿದ ಸಣ್ಣಪುಟ್ಟ ಕೆರೆಗಳು..!
May 22 2024, 12:47 AM ISTಕಳೆದ ಒಂದು ವಾರದಿಂದ ನಿತ್ಯ ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದ ಕೆ.ಆರ್.ಪೇಟೆ ತಾಲೂಕಿನ ಬಹುತೇಕ ಗ್ರಾಮಗಳ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ಸಣ್ಣಪುಟ್ಟ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ತುಂಬಿಕೊಂಡಿವೆ. ಭೀಕರ ಬರಗಾಲದಿಂದ ನಲುಗಿದ್ದ ತಾಲೂಕಿನ ರೈತ ಸಮುದಾಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂತಸದ ನಗೆ ಮೂಡಿಸಿದೆ.